ಕೊಟ್ಟೂರೇಶ್ವರ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಶಿವಸಮಾಧಿಸ್ಥನಾಗಿರುವ ಒಬ್ಬ ಶರಣ. ಕೊಟ್ಟೂರು ಬಸವೇಶ್ವರ ಪುರಾಣ ಎಂಬ ಗ್ರಂಥದಲ್ಲಿ ಈತನ ಮಹಿಮೆ ಮತ್ತು ಪವಾಡಗಳು ನಿಯುಕ್ತವಾಗಿವೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆಯಾಗುತ್ತದೆ. ಶರಣನ ಗದ್ದಿಗೆಯ ಮೇಲೆ ದಿವ್ಯಭವ್ಯವಾದ ದೇವಾಲಯ ನಿರ್ಮಿತವಾಗಿದೆ. ಇದು ಜಾಗೃತಸ್ಥಾನವೆಂದು ಭಾವಿಸಲ್ಪಟ್ಟಿದೆ. ಕೊಟ್ಟೂರೇಶ್ವರನ ಸರದಿಯಲ್ಲಿ ಯಾರೂ ಎತ್ತರವಾದ ಸ್ಥಳದಲ್ಲಿ ಮಲಗಬಾರದೆಂಬ ನಂಬಿಕೆ ಇರುವುದರಿಂದ ನಿಷ್ಠಾವಂತ ಭಕ್ತರಾರೂ ಈ ಊರಿನಲ್ಲಿ ಮಂಚಗಳ ಮೇಲೆ ಮಲಗರು.										(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ